ಶುಕ್ರವಾರ, ಮಾರ್ಚ್ 04, 2011

ಬಾಬರಿ ಮಸ್ಜಿದ್ ಧ್ವಂಸ ಪ್ರಕರಣ:ಸುಪ್ರೀಂ ಕೋರ್ಟ್ ನೋಟಿಸ್

ಬಾಬರಿ ಮಸ್ಜಿದ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ನಿಲುವು ಸ್ಪಷ್ಟಪಡಿಸಲು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಶಿವಸೇನೆಯ ಮುಖ್ಯಸ್ಥ ಬಾಳಠಾಕ್ರೆ ಸೇರಿದಂತೆ 19 ಮಂದಿ ಆರೋಪಿಗಳ ವಿರುದ್ಧ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಎಲ್.ಕೆ.ಅಡ್ವಾಣಿ, ಬಾಳಠಾಕ್ರೆ ಸಹಿತ ಇತರರ ವಿರುದ್ಧದ ಆರೋಪವನ್ನು ಅಲಹಾಬಾದ್ ಹೈಕೋರ್ಟ್ ತೆಗೆದುಹಾಕಿರುವುದರ ವಿರುದ್ಧ ಸಿಬಿಐ ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಎಸ್.ಸಿರ್‌ಪುರ್ಕಾರ್ ಮತ್ತು ಟಿ.ಎಸ್. ಠಾಕೂರನ್ನೊಳಗೊಂಡ ಪೀಠ, ನಾಲ್ಕು ವಾರಗಳೊಳಗೆ ತನ್ನ ನಿಲುವುಗಳನ್ನು ಸ್ಪಷ್ಟಪಡಿಸಬೇಕೆಂದು ಆದೇಶಿಸಿದೆ.
ಅಡ್ವಾಣಿ, ಠಾಕ್ರೆ ಸಹಿತ 19 ಮಂದಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ ಆರೋಪವನ್ನು ವಿಚಾರಣಾ ನ್ಯಾಯಾಲಯ ರದ್ದು ಮಾಡಿರುವುದನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ